ಕೆನಡಾ ದೇಶದ ಅತಿ ಪ್ರಮುಖ ಪ್ರಾಣಿ ಸಂಗ್ರಹಾಲಯಗಳಲ್ಲಿ ಟೊರಾಂಟೋ ಝೂ ಅತಿ ಮುಖ್ಯವಾದುದು. ಈ ಸಂಗ್ರಹಾಲಯದಲ್ಲಿ ಸುಮಾರು ೫ ಸಾವಿರ ಪ್ರಾಣಿಗಳ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳಲಾಗುತ್ತಿದೆ. ಅವುಗಳು ೪೬೦ ಪ್ರಭೇದಗಳಿಗೆ ಸೇರಿವೆ. ಅವುಗಳ ಮಾಹುತರು ತಮ್ಮ ತಮ್ಮ ಕೈಕೆಳಗೆ ಮೇಲ್ವಿಚಾರಣೆಯಾಗುತ್ತಿರುವ ಪ್ರಾಣಿಗಳ ಬಗ್ಗೆ ಮಾಹಿತಿಗಳನ್ನು ಝೂ ವಲಯದಲ್ಲಿ ನಿಗದಿತ ಸಮಯದಲ್ಲಿ ತಿಳಿಸುತ್ತಾರೆ. ಗೋರಿಲ್ಲಾಗಳು ವಾಸಿಸುವ 'ರೇನ್ ಫಾರೆಸ್ಟ್', 'ಆಫ್ರಿಕನ್ ಸವನ್ನಾ', 'ಆಷ್ಟ್ರೇಲಿಯಾದ ದ ಗ್ರೇಟ್ ಬ್ಯಾರಿಯರ್ ರೀಫ್' ೧೦ ಎಕರೆ ಪ್ರದೇಶದ 'ಟುಂಡ್ರಾ ಟ್ರೆಕ್', ಗಳನ್ನು ಕಾಣಬಹುದು. ಇಲ್ಲೇ 'ಪೋಲಾರ್ ಬೇರ್', ಆರ್ಕ್ಟಿಕ್ ವುಲ್ವ್ಸ್, ಸಿಗುತ್ತವೆ. 'ಕಿಡ್ಸ್ ಡಿಸ್ಕವರಿ ಝೋನ್', ಹಾಗೂ 'ಸ್ಪ್ಲಶ್ ಐಲೆಂಡ್ ಕಿಡ್ಸ್ ಝೂ' ಇದೆ. ಇಲ್ಲಿ ದಿನ ನಿತ್ಯವೂ ಪ್ರಾಣಿಗಳ ಪ್ರದರ್ಶವಿದೆ. == ಉಲ್ಲೇಖಗಳು ==